ಕಮಲ ವದನ, ಪದ್ಮ ಪಾದ
ಪದ್ಮ ಹಸ್ತ, ಬೆಣ್ಣೆಗೆನ್ನೆ, ತಿಳಿಗೆಂಪು ಕೆನ್ನೆ
ಚೆನ್ನಂದಾ ನಾಸಿಕವ ಹೊಂದಿದಾ ಮುದ್ದು ಕಂದನೇ
ಮಯೂರ, ಸ್ವರ್ಣ ಮಯೂರ
ದಿನವು ನಿನ್ನನು ಮುದ್ದಿಸೀ, ಮುದ್ದಿಸಿ
ಆ ಕಂಗಳಲಿರುವಾ ಮುಗ್ಧತೆಗೆ ಸೋತುಹೋಗಿ
ಆ ಕಡುಗಪ್ಪುಗಂಗಳರಿರುವ ಮುಗ್ಧತೆಗೆ ಸೋತುಹೋಗಿ
ತಿಟಿಯ೦ಚಿನಲರಳುವಾ ನಗೆಗೆ, ಆ ಪುಟ್ಟ ನಗೆಗೆ
ಮಾರುಹೋಗಿ..
ದಿನವು ನಿನ್ನನು ಮುದ್ದಿಸೀ ಮುದ್ದಿಸೀ ತೃಪ್ತಿ ಪಡುವಾ
ಅಮ್ಮ ನಾನು, ಕಂದ ನೀನು,
ಮಯೂರ, ಸ್ವರ್ಣ ಮಯೂರ
ಸವಿಗನಸನೆ ಕಾಣುತಾ
ಮಲಗು ನೀ ಮುದ್ದು ಕಂದನೇ
ದೇವರೊಡನೆ ಸಂಭಾಷಿಸುತಾ ಮಲಗು ನೀ
ಪುಟ್ಟ ಕಂದನೇ..
ತಾಸ ಬಳಿಕ ಎದ್ದು ಉಟ ಮಾಡುವಿಯಂತೆ
ಆ ವರೆಗೂ..ಮಲಗು ನೀ..
ಪುಟ್ಟ ಕಂದನೇ
ಮಯೂರ, ಸ್ವರ್ಣ ಮಯೂರ..
ಇಲ್ಲಿದೆ ಹಾಡು:
mayUra.wmv