Monday, April 8, 2013

ಹಸಿರೇ ಉಸಿರಾ?

ಬಿಸಿಲಲಿ ನಡೆ ನಡೆದು ದೇಹ ದಣಿದು
ನೆರಳ ಬಯಸಿತು
ಹಸಿರ ನೆರಳ ಬಯಸಿತು
ಬೃಹತ್ ಕಟ್ಟಡದಾ ನೆರಳು ಆಸರೆಯಾಯಿತು
ಹಸಿರು ಮರದ ತಂಪು ನೆರಳು ನಿಲುಕದಾಯಿತು

ಕಟ್ಟಡದಡಿ ಕುಳಿತು ಬೆವರನೊರೆಸಿ
ಗಾಳಿ ಬಯಸಿತು
ಹಸಿರ ಗಾಳಿ ಬಯಸಿತು
ಕಾರ್ - ಖಾನೆಯ ಗಾಳಿ ಉಸಿರಾಯಿತು
ಹಸಿರು ಮರದ ತಂಪು ಗಾಳಿ ಕನಸಾಯಿತು

ಬೆವರೊರೆಸಿದ ಕರವಸ್ತ್ರ ಮಸಿಯಾಯಿತು 



1 comment:

  1. ಬಹಳ ಸಮಯದ ನಂತರ ನಿಮ್ಮ ಕವನ ಓದಿ ಬಹಳ ಸಂತೋಷವಾಯಿತು. ಕವನ ತುಂಬಾ ಚೆನ್ನಾಗಿದೆ. ನಿಮ್ಮ ಪುಕ್ಸಟ್ಟೆಬರವಣಿಗೆ ನಿರಂತರ ಮುಂದುವರೆಯಲಿ...ಪ್ರಕಾಶ್.ಎಂ.ವಿ.

    ReplyDelete