Thursday, October 1, 2009

ಅರುಣೋದಯ

ಕಣ್ಣೋಟವನೆದುರಿಸಲಾಗದೆ ಕಾಲ್ಬೆರಳುಗಳ ನೋಡಿದೆ
ದನಿಯ ಕೇಳಿ ವಿಸ್ಮಿತಳಾದೆ
ಒಮ್ಮೆ ನೋಡಬೇಕೆಂಬಾಸೆಯ ನೀಗಿಸಲಾಗದೆ
ಮಿಂಚಿನಂತಹ ನೋಟದಿ
ನಾಚಿ ನೀರಾದೆ, ತಲೆ ಬಾಗಿಸಿದೆ

ಮೂಕಳಾದೆ, ಅಧೀರಳಾದೆ
ಇವರು ನನ್ನವರಾಗಬಹುದೆ?
ಬಾನ ಚಂದ್ರಕೆ ಹಾತೊರೆಯುವುದೇ?
ಏಕಾಂತವ ಬಯಸಿ
ಹೆಜ್ಜೆಗೆ ಹೆಜ್ಜೆ ಬೆರೆಸಿ
ಮಹಡಿಗೆ ಮೆಟ್ಟಿಲುಗಳನ್ನೇರಿದೆ
ಅವು ಜೀವನದ ಮೆಟ್ಟಿಲುಗಳಾಗಬಾರದೆ?

ಇವರೆದುರು ನಿಂತಾಗ ತಬ್ಬಿಬ್ಬಾದೆ
ಎವೆಯಿಕ್ಕದೆ ನೋಡಲಾಗದೆ
ಕೈಬಳೆಗಳ ತಿರುವಿದೆ
ಮಾತನಾಡಲಾಗದೆ ಮನಸೋತೆ, ಮೈಮರೆತೆ
ನೀ ನನ್ನವನಾಗಬಾರದೆ?
ಎಂದು ನಾ ಕೇಳಲಾಗದಾದರೂ
ಭಾವನೆಗಳ ನಾ ಮರೆಮಾಚಲಾದೆ

ಮೊದಲ ನೋಟದಿ ಪ್ರೀತಿಯ ಸ್ಪರ್ಷವಾಯಿತೆ
ಅಂದಿನ ಕಡೆಯ ನೋಟದಿ ಭರವಸೆಯಿತ್ತೆ?
ನಾ ಹೇಳಲಾದೆ
ಏಳು ದಿನಗಳು ಕಾದೆ
ಅದು ನರಕಯಾತನೆಯೆ?
ಕಲ್ಪನೆಗಳು ನಿಲ್ಲದಾಯಿತೆ
ಕೃಷಳಾದೆ,ಹತಾಶಳಾದೆ
ಕಂಬನಿಗಳಿಂದ ತಲೆದಿಂಬ ತೋಯ್ದೆ
ಅಸಹಾಯಳಾದೆ, ದೇವರ ಬೇಡಿದೆ
ನನ್ನ ನಾ ಹಳಿದೆ

ಕಡೆಗೆ ಕರೆ ಬಂದಿತು
ವರನಿಗೆ ಒಪ್ಪಿಗೆಯೆಂದಾಯಿತು
ನಾ ಹರ್ಷದಿ ಕಂಬನಿಯಿತ್ತೆ
ಮತ್ತೆ ಇವರ ನೋಡಲು ಹಾತೊರೆದೆ
ವಿಧಿಯಾಟವ ಹೊಗಳಿದೆ
ನನ್ನ ಬಾಳಲಿ ಅರುಣೋದಯವಾಗಿದೆ

ನೆನಪಿನ ಸುರುಳಿಯಲಿ ಧ್ವನಿಯಿಲ್ಲವಾಗಿದೆ
ಕನಸಿನಂತೆ ಕಣ್ಮುಂದೆ ತೇಲಿದೆ
ಆ ಏಳು ದಿನಗಳ ಕಾದಾಟ
ಈಗ ಸವಿನೆನಪಾಗಿದೆ
ಇವರು ಕಚೇರಿಯಿಂದ ತೆರಳಲು
ನಾ ಕಾಯುತಿರುವೆ
ಆ ಮೊದಲ ನೋಟದ ಮಾಯೆ
ಇಂದಿಗೂ ಮರೆಯಾಗದೆ ಉಳಿದಿದೆ


* ಇದು ಪದ್ಯವೋ ಗದ್ಯವೋ ನನಗೆ ಗೊತ್ತಿಲ್ಲ..ಭಾವನೆಗಳನ್ನು ಬರೆಯಲು ಮನಸಾಯ್ತು..ಮನ:ಪಟಲದಿಂದ ಅಳಿಸದಿರಲಿ ಎಂದು..

8 comments:

  1. Great work Asha avare. Arun avru lucky. I thoroughly enjoyed the poem.
    Nimma kavitha prouDhimeyannu heege munduvaresi.
    oLLedaagali,
    Shridhar

    ReplyDelete
  2. ಶ್ರೀಧರ್, ತಮ್ಮ ಪ್ರೋತ್ಸಾಹಕ್ಕೆ ಬಹಳ ಧನಯವಾದಗಳು..

    ReplyDelete
  3. Tumba chennagide. You are a very talented writer. It felt as if I was with you through the whole "Oddhaata" :).

    BTW naanu Arun friend. Very good to see you blogging, very apt replacement for his blog (looks like he has become a total somberi these days when it comes to blogging). Hope to read much more from you :)).

    ReplyDelete
  4. Wanted to add that nandu opposite case. I made my hubby wait for a week before I said Yes, he said "yes" that day itself!

    ReplyDelete
  5. @Deeps
    ದೀಪ್ತಿ ಅವರೆ..ಧನ್ಯವಾದಗಳು..:) ಇವ್ರು ಹೇಳ್ತಿರ್ತಾರೆ..ನಿಮ್ ಮಗಳ ಫೋಟೋಗನ್ನ ಕೂಡ ನೋಡಿದೀನಿ..ತುಂಬಾನೆ ಮುದ್ದಾಗಿದಾಳೆ..:)
    ಇವ್ರು ಸೊಮಾರಿ ಆದ್ರೂ ನನಗೆ ಆಗಾಗ ಬರೆಯೋಕೆ ಹುರಿದುಂಬಿಸ್ತಿರ್ತಾರೆ..:)
    ಮತ್ತೆ ಪಾಪ ನಿಮ್ಮವರು..ಅಷ್ಟು ದಿನಗಳು ಕಾಯಿಸಿದ್ರಲ್ಲ..ಆದ್ರೂ ನಿಮ್ಮ ಯೊಚನೆಗಳು ಹೇಗಿದ್ವೋ ಅನ್ನೋದು ನನಗೆ ಕುತೂಹಲ ಹುಟ್ಟಿಸತ್ತೆ..

    ReplyDelete
  6. Hehehe :)). Gandana support chennage naditha ide ;-). Glad to know you have seen my photos :).

    I have been blogging for more than 4.5 years now at http://deardeepthi.blogspot.com, alli nan ardha life kathe ide :-D. So you can satisfy your curiosity there :). But to summarize, nandu 60% yes aagitthu, aadre innondu sarthi meet maadi confirm maadkobekithu. I was able to meet him only after 7 days :-D.

    ReplyDelete
  7. ನಾನು ಪದ್ಯ ವಿಚಾರವನ್ನು ಅಂತರ ಜಾಲದಲ್ಲಿ ಹುಡುಕುತ್ತಿರುವಾಗ ನಿಮ್ಮ Siteಗೆ ಬಂದೆ. “ಇದು ಪದ್ಯವೋ ಗದ್ಯವೋ ನನಗೆ ಗೊತ್ತಿಲ್ಲ..ಭಾವನೆಗಳನ್ನು ಬರೆಯಲು ಮನಸಾಯ್ತು..ಮನ:ಪಟಲದಿಂದ ಅಳಿಸದಿರಲಿ ಎಂದು.. “ ಇದನ್ನು ನೋಡಿ ನಾನು ಕಲಿತದನ್ನು ಬರೆದ್ದಿದ್ದೇನೆ. ಪದ್ಯಕ್ಕೆ ನಿಯಮವಿರುತ್ತೆ. ನಿಯಮಗಳು: ಪ್ರಾಸ ಹಾಗು ಛಂದಸ್ಸು. ಕನ್ನಡ ಪದ್ಯದ ವಿಶೇಷ ದ್ವಿತಿಯಾಕ್ಷರ ಪ್ರಾಸ. ನಿಮ್ಮ ಭಾವನೆಯ ಶುರುವನ್ನು - ಈ ರೀತಿ ಬರೆದರೆ ಅದು ಕಂದ ಪದ್ಯವಾಗುತ್ತದೆ.

    ಕಣ್ಗಳ ಕೂಟಕೆ ಸೋತೂ
    ಹಣ್ಣಾಗಿ ಮನವು ಸರಿಯಿತು ಕಾಲ್ಬೆರಳೆಡೆಗೇ ||
    ಬೆಣ್ಣೆಯ ನಯದ ದನಿ ಸೆಳದ
    ಕಣ್ಣ್ಮಿಂಚಿನ ನೋಟ ನಾಚಿಸಿ ಶಿರಮಣಿಸಿತೂ ||

    ಇಲ್ಲಿ ಎಲ್ಲ ಪಾದಗಳಲ್ಲು (lines) ಎರಡನೇ ಅಕ್ಷರ”ಣ್ಣ’ – ಇದಕ್ಕೆ ದ್ವಿತಿಯಾಕ್ಷರ ಪ್ರಾಸ ವೆನ್ನುತ್ತಾರೆ. ಛಂದಸ್ಸು ಎಂದರೆ ಹೊದಿಗೆ (ಅಂದವಾಗಿರುವರು ಇನ್ನು ಚಂದವಾಗಿ ಕಾಣಲು ಮಾಡುವ ಅಲಂಕಾರ ದಂತೆ). ವರ್ಣ ಮತ್ತು ಮಾತ್ರ ಎಂದು ಎರಡು ವಿಧದ ಛಂದಸ್ಸು ಇದೆ. ಪ್ರತಿ ಸಾಲಿನಲ್ಲೂ ನಿಯಮಿತ ಅಕ್ಷರ count ವರ್ಣ ವೃತ್ತ.
    ಪ್ರತಿ ಅಕ್ಷರಕ್ಕೂ ಮಾತ್ರ(duration) count ಇದೆ. ಹ್ರಸ್ವ =೧ ದೀರ್ಘ=೨ ಇತ್ಯಾದಿ. ಪ್ರತಿಪಾದಕ್ಕೂ ಮಾತ್ರ count ಗಳಿವೆ.

    ನಿಮ್ಮ ಭಾವನೆ ತುಂಬ ಚೆನ್ನಾಗಿ ಮೂಡಿದೆ (natural beauty). ಯಾವ ಅಲಂಕಾರವಿಲ್ಲದೆ ಶೋಭಿಸುವ ವನಕುಸುಮದಂತೆ. ಜೀವನವೂ ಹಾಗೆ ಶೋಭಿಸಲಿ.

    ಸಂಚಾರಿ

    ReplyDelete
  8. namaste Asha avare,

    baravanige gadyavo padyavo mukhyavaagodilla, barahagaarara bhaavanegalanna saalugalu bimbisuvantirabeku, ee saalugalu aa kelasavanna sogasaagi madive. nimma vaivaahika jeevana heege sundaravaagirali endu haaraisuttene...

    ReplyDelete