Sunday, October 11, 2009

ನೆನಪುಗಳ ಸರಪಳಿ

ನೆನಪಿನ ಪುಟಗಳ ತೆರೆದಿಡು ನೀ
ಕಪ್ಪು-ಬಿಳುಪು ಚಿತ್ರಗಳನು
ಬಣ್ಣವ ತುಂಬಿ ಬಣ್ಣಿಸು ನೀ
ಹತ್ತಿದುದು ನಡುವೆಯಲಾದರೂ
ಬಂಡಿಯು ಸಾಗಿದ ಹಾದಿಯ
ತಿಳಿಯ ಬಯಸಿಹೆ ಎನ್ನಿನಿಯ

ಹಳೆ ನೆನಪುಗಳ ಸಿಹಿ-ಕಹಿಗಳನು
ಸವಿಯುತ-ಸಹಿಸುತ ಕೈಹಿಡಿದು
ಆ ಸೂತ್ರಧಾರನ ಮೇರೆಗೆ
ಹೊಸ ನೆನಪುಗಳ ಚಿತ್ರಣದಿ
ನಟಿಸುವ ಈರ್ವರು ಸಂಭ್ರಮದಿ

ಬಂಡಿಯ ಮುಂದಿನ ಮಾರ್ಗವ
ಜೊತೆಯಲಿ ಸೇರಿ ಹುಡುಕೋಣ
ಬಾಳಿನ ಗುರಿಯನು ತಲುಪೋಣ
ಹೊಸ ನೆನಪುಗಳಿಗೆ ತಳಹದಿಯ
ನಾವಿನ್ನು ಜೊತೆಗೂಡಿ ಕಟ್ಟೋಣ

5 comments:

  1. nenapugaLa sarapaLi eLedhu thanda nimma baaLa bandiya payaNa sogasaagidhe, mundina payaNake ShuBhavaagali - nagarathna

    ReplyDelete
  2. ನಿಮ್ಮ ಹಾರೈಕೆಗೆ ಧನ್ಯವಾದಗಳು..ಯಾವಾಗಲಾದ್ರೂ ಕರೆ ಮಾಡ್ತೀನಿ..ಬಹಳ ದಿನಗಳಾದ್ವು ನಿಮ್ ಜೊತೆ ಮಾತಾಡಿ..ನಿಮ್ಮನ್ನೆಲ್ಲ miss ಮಾಡ್ಕೋತೀನಿ..

    ReplyDelete
  3. Nimmanthe adeshtu jana pratibhe iroru ele mare kaayaagi iddaaro naa kaaNe. I am saying this honestly - Neevella Kannada chitrarangakke bandiddare namma chitraranga adeshTo beLeyuttittu. Idu atishayokti alla. Nanna manadaaLada maatu.

    ReplyDelete
  4. chennagide !
    hige munduvareyali nimma kannadada kelasa !

    ReplyDelete