Wednesday, June 3, 2009

ಭಾಷಾಭಿಮಾನ

ನಾವಿರುವುದು ಜರ್ಮನಿಯ ಫ್ರೈಬುರ್ಗ್ ಎಂಬ ಒಂದು ಸಣ್ಣ ಊರಿನಲ್ಲಿ.ನಾನು ಇಲ್ಲಿ ಬಂದು ಮೂರು ತಿಂಗಳಾಗಿವೆ ಅಷ್ಟೆ.ನಾನು ಇಲ್ಲಿ ಬಂದ ಹೊಸತರಲ್ಲಿ ಇವರ(ನಮ್ಮ ಯಜಮಾನರ) ಅತಿಯಾದ ಕನ್ನಡ ಭಾಷಾಭಿಮಾನವನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು.ಕನ್ನಡದ ಬಗ್ಗೆ ಅಭಿಮಾನವಿದ್ದರೂ ಆಂಗ್ಲಮಾಧ್ಯಮದ ಹಲವಾರು ಪದಗಳು,ವಾಕ್ಯಗಳನ್ನು ಬಳಸುವುದು ರೂಢಿಯಾಗಿ ಹೋಗಿದೆ ನನಗೆ.ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲೆ ಎಂದು ಸ್ವಲ್ಪ ಒಣಜಂಭ ಇದ್ದೆ ಇತ್ತು.ಇವರು ಅದಕ್ಕೆ ಒಂದಿನಿತೂ ಪ್ರೋತ್ಸಾಹ ಕೊಡಲಿಲ್ಲ.ಅದಿರಲಿ,ತೀವ್ರವಾಗಿ ವಿರೋಧಿಸುತ್ತಿದ್ದರು.ನನಗೂ ಮೊದಮೊದಲು ಕೋಪ ಬರುತ್ತಿತ್ತು.ಆದರೆ ಇತ್ತೀಚೆಗೆ ಇವರು ಹೇಳುವುದು ಸರಿ ಎಂದು ನಿಧಾನವಾಗಿ ಅರ್ಥವಾಗುತ್ತಿದೆ..ಈ ದೇಶದ ಜನರನ್ನು ನೋಡಿದ ಮೇಲೆ.ಕ್ರೆಡಿಟ್ ಕಾರ್ಡ್ ಪ್ರಕಟಣೆಗೆಂದು ದೂರವಾಣಿ ಕರೆ ನೀಡಿದವರೂ ಸಹ ನಾನು ಜರ್ಮನ್ ಬಿಟ್ಟು ಇಂಗ್ಲಿಷ್ನಲ್ಲಿ ಪ್ರತಿಕ್ರಿಯೆ ನೀಡಿದುದಕ್ಕೆ ಫೋನನ್ನು ಕುಕ್ಕಿಬಿಡುವುದೆ! ನಮ್ಮ ಬೆಂಗಳೂರು ನೋಡಿ..ಹೇಗಾಗಿ ಹೋಗಿದೆ..ಬಸ್ಸಿನ ಒಂದು ಗುಂಪಿನಲ್ಲಿ ನಿಂತರೆ ಕಡಿಮೆ ಎಂದರೂ ಐದಾರು ಭಾಷೆ ಕೇಳಬಹುದು.ಮಧ್ಯೆ ಎಲ್ಲಾದರೊಮ್ಮೆ ಕನ್ನಡ ಕೇಳಿಸಿದರೆ ಪುಣ್ಯ.ಯಾರು ಯಾವುದೇ ಭಾಷೆಯನ್ನು ಮಾತನಾಡಿದರೂ ನಮ್ಮ ಬೆಂಗಳೂರಿನ ಹಳೇ ಕನ್ನಡಿಗರು ಸಹಕರಿಸಿಬಿಡುತ್ತಾರೆ.ಹೀಗೇಕೆ?ನಮ್ಮ ಕನ್ನಡದ ಮೌಲ್ಯ ತಿಳಿಯಬೇಕಾದರೆ,ಅದರ ಸುಗಂಧ ಸವಿಯಬೇಕಾದರೆ ನಾನು ಇಷ್ಟು ದೂರ ಬರಬೇಕಾಯ್ತೆ?ನಾನು ಹಲವಾರು ಬೆಂಗಳೂರಿನವರಂತೆ ಹಿಂದಿ,ತಮಿಳು,ಇಂಗ್ಲಿಷ್,ಕೊನೆಗೆ ಮಲಯಾಳಮ್ ಸಹ ನನ್ನ ಕಚೇರಿಯ ಜನರೊಡನೆ ಸಂಪರ್ಕವಿದ್ದಾಗ ಚೂರು ಪಾರು ಮಾತನಾಡುತ್ತಿದೆ..ಅದೇಕೆ ಹಾಗೆ ಮಾಡಿದೆನೋ ನಾ ಅರಿಯೆ.ಇಲ್ಲಿ ಬಂದು ಪರಿತಪಿಸಿದರೆ ಏನು ಪ್ರಯೋಜನ!ಒಂದಿಬ್ಬರಿಗೆ ಕನ್ನಡ ಕಲಿಸುವ ಅವಕಾಶವನ್ನೂ ಕಳೆದುಕೊಂಡು ಬಿಟ್ಟೆ.ಮತ್ತೆ ಇಲ್ಲಿ ಬಂದು ಜರ್ಮನ್ ಕಲಿಯಬೆಕಾಗಿದೆ..ಎಂಥ ವಿಪರ್ಯಾಸ..
ಪೂರ್ಣ ಚಂದ್ರ ತೇಜಸ್ವಿಯವರ "ಜುಗಾರಿ ಕ್ರಾಸ್",ಕೇಶವರಾವ್ ಅವರ "ಬೀಚಿ: ಬುಲ್ಲೆಟ್ಸು,ಬಾಂಬ್ಸು,ಭಗವದ್ಗೀತೆ",
ಗಳಗನಾಥರ ಸಣ್ಣ ಕಥೆ ಓದಿ ಕನ್ನಡ ಪ್ರೇಮ ಹೆಚ್ಚಾಗಿದೆಯೋ,ಈ ದೇಶದ ಜನರನ್ನು ನೋಡಿ ಹೆಚ್ಚಾಗಿದೆಯೋ,ಅಥವಾ ಇವರು ಪದೇ ಪದೇ ನನ್ನ ಇಂಗ್ಲಿಶ್ ಆಕ್ಸೆಂಟ್ ಅನ್ನು ಅಣಕಿಸಿ ಕುಚೋದ್ಯ ಮಾಡುವುದಕ್ಕಾಗಿ ಬುದ್ಧಿ ಬಂದಿದೆಯೋ ತಿಳಿಯದು..ಆದರೆ ಈ ಅನುಭವ ಮಾತ್ರ ಅಧ್ಭುತವಾಗಿದೆ..ಇದ್ದಕ್ಕಿದ್ದ ಹಾಗೆ ನಮ್ಮ ಭಾಷೆಯ ಬಗ್ಗೆ ಹೊಸ ಪ್ರೇಮ,ಗೌರವ ಮೂಡಿದೆ..ನಾನು ಇವರನ್ನು ಮದುವೆಯಾದ ಮೇಲೆ ಹೊಸ ಪ್ರೀತಿ ಮೂಡಿದ ಅನುಭವಕ್ಕೆ ಹೋಲಿಸಬಹುದೇನೋ..ನಮ್ಮ ಭಾಷೆಯ ಸೌಂದರ್ಯಕ್ಕೆ ಮರುಳಾಗಿ ಹೋಗಿದ್ದೇನೆ..ನಾವಿಬ್ಬರೂ ಜೊತೆ ಜೊತೆಯಲ್ಲಿ ಜೀವನ ಕಳೆಯುತ್ತ ಮುದುಕರಾಗಿ ನಮ್ಮ ಸೌಂದರ್ಯ ಬತ್ತಿ ಹೋಗುತ್ತದೆ..ಎಲ್ಲ ಜೀವಿಗಳೂ ಅಷ್ಟೆ..ಆದರೆ ವರ್ಷಗಳು ಕಳೆದಹಾಗೆ ಕನ್ನಡ ಇನ್ನೂ ಹೊಚ್ಚ ಹೊಸದಾಗಿ,ಹೆಚ್ಚು ಸುಂದರವಾಗಿ ಕಂಗೊಳಿಸುತ್ತದೆ..ಕನ್ನಡಿಗಿಂತಲೂ ಕನ್ನಡ ಸುಂದರ..ಅದನ್ನು ಪ್ರೀತಿಸಲು ಮಾತ್ರ ಕೇಳಿಕೊಂಡು ಬಂದಿರಬೇಕು..ನನ್ನಂಥಹ ಹಲವರು ಈಗಾಗಲೆ ಬಹಳ ಕಾಲ ಇದರ ಕಂಪನ್ನು ಸವಿಯದೆ,ಹರಡದೆ ಸಮಯ ವ್ಯಯ ಮಾಡಿದವರಿಗೆ ಈ ನನ್ನ ಅಂಕಣ ಒಂದು ಕಿವಿಮಾತು.

-ಒಬ್ಬಳು ಕನ್ನಡ ಪ್ರೇಮಿ

34 comments:

  1. Excellent. Kannadakke Kannadagire ShatrugaLu...We tend to over friendly with ppl. Ade nammalli iruva samasye.

    ReplyDelete
  2. @V
    ಧನ್ಯವಾದಗಳು..ಈ ಸಮಸ್ಯೆಗೆ ಪರಿಹಾರ ಬೇಗ ಕೈಗೂಡಿದರೆ ಸಂತೋಷ..

    ReplyDelete
  3. Konegu.. Kannadadha Mahathva arthavaithalla adhe kushi.. :)

    ReplyDelete
  4. paradeshakke hodaga namma bhashedu mahatva hecchadu sahaja.

    ReplyDelete
  5. @Maddy
    ತಮ್ಮ ನೇರ ಅಭಿಪ್ರಾಯಕ್ಕೆ ಧನ್ಯವಾದಗಳು..ಹೌದು..ನನಗೂ ಖುಶಿ..

    ReplyDelete
  6. @shande
    ಅದೆನೋ ಸರಿ shanDe..ಆದರೆ ಕೆಟ್ಟ ಮೇಲೆ ಬುದ್ಧಿ ಬಂತು..ತಡವಾಗಿ ಹೋಯ್ತು..ಆದರೂ maddy ಹೇಳಿದ ಹಾಗೆ ಕಡೆಗೂ ಬುದ್ಧಿ ಬಂತು ಸಧ್ಯ..

    ReplyDelete
  7. ನಾನು ಫ್ರಾನ್ಸ್ ನಲ್ಲಿ ಬಹಳ ಕಾಲ ವಾಸಿಸಿದ್ದೆ. ಅಲ್ಲಿ ಕನ್ನಡಾಭಿಮಾನ ಚಿಗುರಿದ್ದರಲ್ಲಿ ಸಂಶಯವಿಲ್ಲ. ನನಗೆ ಕನ್ನಡದ ಬಗ್ಗೆ ಇದ್ದ ಕೀಳರಿಮೆ ಮತ್ತು ವಿಶ್ವ ಮಾನವತ್ವ ಫ್ರಾನ್ಸ್ ಗೆ ಬರುವವರೆವಿಗು ಹೋಗೇ ಇರಲ್ಲ್ಲಿಲ್ಲ. ಸದ್ಯ ಅಲ್ಲಿಗೆ ಬಂದ ಮೇಲಾದರು ಹೋಯಿತಲ್ಲ ಎಂದು ಖುಷಿಯಾಗುತ್ತಿದೆ.

    ReplyDelete
  8. @Ramesh
    ಓ..ಎಷ್ಟು ಜನ ನಮ್ಮಂಥವರಿದ್ದಾರೋ..ಅಂತೂ ಪರದೇಶದಿಂದ ಪಾಠ ಕಲಿಯುತಿದ್ದೇವೆ ಎನ್ನುವುದು ಮಾತ್ರ ಸ್ವಲ್ಪ ಮುಜುಗರದ ವಿಷಯವೇ..

    ReplyDelete
  9. Thamma blogu ottinalli yashaswi. Kannadave kamadhenu Karnatakave Kalpavriksha anno mathanna ee blogina hit sankhye sabitu maaduttide...Bahushaha english nalli ee anKana barediddare iStu jana odugaru iruttiralillaveno!

    ReplyDelete
  10. ನಿಮ್ಮ ಕಥೆ ತುಂಬ ಚೆನ್ನಾಗಿದೆ... ನನ್ನ ಒಂದು ನಿಜ ಅನುಭವ ಹೇಳ್ತೀನಿ ಕೇಳಿ: ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಹೋಗೊವಾಗ ನನ್ನ ಕಾಯ್ದಿರಿಸಿದ ಆಸನದ ಪಕ್ಕದಲ್ಲಿ ಆಡುತ್ತಿದ್ದ ಮಗುವಿಗೆ "ನಿನ್ನ ಹೆಸರೇನು?" ಅಂಥ ಮಾತಿಗಿಳಿದೆ. ಅತನಮ್ಮ ಸುಂದರ ಸ್ಪುರದ್ರೂಪಿ ಹೆಂಗಸು "ಟೆಲ್ ಯುವರ್ ನೇಮ್ ನೋ" ಅಂತ ಕಿರುಚಿದಳು. ನಾನು ಹಾಗೆ ಹುಸಿ ನಕ್ಕು ಸುಮ್ಮನಾದೆ. ನನಗೆ ಗೊತ್ತಾದ ಪ್ರಕಾರ ಅವಳಿಗೆ ಕನ್ನಡ ಚೆನ್ನಾಗಿ ಬರುತಿತ್ತು. ಅ ಮಗುವಿಗೆ ಅವಳ ಕಿತ್ತು ಹೋಗಿರೊ ಕಾಲುಭಾಗ ಇಂಗ್ಲೀಷ್ ನಲ್ಲಿ ಮಾತಡಿಸ್ತಿದ್ಲು. ಅವಳ ದುರಾದ್ರುಷ್ಟಕ್ಕೆ ಆ ಮಗು ಕನ್ನಡದಲ್ಲೆ ಮಾತಾಡುತಿತ್ತು. ಟಿಕೆಟ್ ಚೆಕ್ ಮಾಡೋ ತಮಿಳ್ ನವನು ಬಂದ ಆ ಶುರು ಅಯ್ತು ಅವನ ಅರ್ಧ ಕಿತ್ತೋಗಿರೊ ಇಂಗ್ಲಿಷ್ ಇವಳ ಕಾಲು ಭಾಗ ಇಂಗ್ಲಿಷ್. ಅವನು ಹೇಳಿದ್ದು ಇವಳಿಗೆ ತಿಳಿಯದೆ, ಇವಳು ಹೇಳಿದ್ದು ಅವನಿಗೆ ತಿಳಿಯದೆ, ಕೊನೆಯಲ್ಲಿ ಆ ಮಗುವಿಗೆ ಟಿಕೆಟ್ ಇಲ್ಲದ್ರಿಂದ ದಂಡ ಕೊಡಬೇಕಾಯಿತು. ನಂತರ ನನ್ನ ಬಳಿ ಬಂದಾಗ ಅವನು ಹೇಳಿದ "ನೋಡಿ ಸರ್, ಇಂಗ್ಲಿಷ್ ನಲ್ಲಿ ಮಾತಾಡ್ತಾರೆ, ಮಗುವಿಗೆ ಟಿಕೆಟ್ ಇಲ್ಲ ಅಂದ್ರೆ ಒಳ್ಳೆ ಭಾಷೆಲಿ ಮನವಿ ಮಾಡ್ಕೊಳ್ಳೋಕು ಬರೋಲ್ಲ, ನಾನೆ ಇಂಗ್ಲಿಷ್ ಬಿ.ಎ. ಅಣ್ಣಾ ಉನಿವಸಿಟಿ" ಅಂತ ನಕ್ಕ.

    ReplyDelete
  11. ಆಶಾ ಅವರೆ:
    ಚೆನ್ನಾಗಿ ಬರೆಯುತ್ತೀರಿ. ಅಭಿನಂದನೆಗಳು.
    ನಿಮ್ಮವರಿಗೂ ಕೂಡ.
    ಅಭಿಮಾನ ಎಲ್ಲರಲ್ಲೂ ಇರುತ್ತದೆ, ಹೊರಬರುವ ಅವಕಾಶ ಕಡಮೆ ಕೆಲವರಲ್ಲಿ ಅಷ್ಟೆ.
    ಇತೀ, ಉಉನಾಶೆ.

    ReplyDelete
  12. kannaDada bagge nimmalliya abhimaana jaastiyaadaddu keLi khuShiyaayitu... heege bareyuttiri

    ReplyDelete
  13. @V,ಉಉನಾಶ,ರವೀಶ್
    ತಮಗೆಲ್ಲರಿಗೂ ನನ್ನ ಧನ್ಯವಾದಗಳು..ಮೊದಲನೇ ಪ್ರಯತ್ನವಾದ್ದರಿಂದ ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಖಂಡಿತವಾಗಿಯೂ ಅಗತ್ಯವಾಗಿತ್ತು..ಮತ್ತೂ ಬರೆಯಲು ಹುರುಪು ತುಂಬಿದಕ್ಕೆ ಧನ್ಯವಾದಗಳು..

    ReplyDelete
  14. This comment has been removed by the author.

    ReplyDelete
  15. @Megharaja
    ದಯವಿಟ್ಟು ನೀವು ನನಗೊಬ್ಬಳಿಗೇ ಅಲ್ಲದೆ ಇದನ್ನು ಎಲ್ಲರಿಗೂ ತಿಳಿಸಿ..ತಾರಮ್ಮಯ್ಯ ಹೇಳಿಕೊಡಬೇಕಾದ ಮಕ್ಕಳಿಗೆ ಮೊದಲು hi-5 ಹೇಳಿಕೊಟ್ಟು ಹಾಳು ಮಾಡುತ್ತಿದ್ದಾರೆ..ನಿಜ..ಮಗುವಿಗೆ ತಾನೊಬ್ಬ ಕನ್ನಡಿಗ ಎಂದು ಹೆಮ್ಮೆ ಮೂಡಿಸುವುದು ತಾಯಿಯ ಕರ್ತವ್ಯ..ನೀವು ಕೊಟ್ಟ ನಿದರ್ಶನ ಈಗಿನ ಕರ್ನಾಟಕದ "ಮುಂದುವರೆದ ಸಿಟಿ"ಗಳಲ್ಲಿ ಕಟುಸತ್ಯವಾಗಿದೆ..

    ReplyDelete
  16. ತುಂಬಾ ಚನ್ನಾಗಿ ಬರೆದಿದ್ದೀರಿ...

    ReplyDelete
  17. ಶಿವಪ್ರಕಾಶ್ ಅವರೆ, ಧನ್ಯವಾದಗಳು..

    ReplyDelete
  18. ಅರುಣಾದ್ರಿ.ಎಮ್.ಜೆJune 5, 2009 at 5:53 AM

    ನಿಮ್ಮ ಬ್ಲಾಗ್ ಬಗ್ಗೆ ಬನವಾಸಿ ಬಳಗದ ಗೂಗಲ್ ಗುಂಪಿನಲ್ಲಿ ಒಂದು ಈಮೇಲ್ ನೋಡಿದೆ. ಅಲ್ಲಿಂದ ಇಲ್ಲಿಗೆ ಬಂದು ನಿಮ್ಮ ಬರಹ ಓದಿದೆ.. ನಿಜಕ್ಕೂ ಖುಷಿ ಆಯ್ತು. ಕನ್ನಡದ ಹೆಣ್ಣು ಮಕ್ಕಳಲ್ಲಿ ಕನ್ನಡಾಭಿಮಾನ ಮಾಯವಾಗ್ತಾ ಇರೋ ಸ್ಪಿಡ್ ನೋಡಿ ನಿಜಕ್ಕೂ ಗಾಬರಿಯಾಗ್ತಾ ಇತ್ತು ನನಗೆ. ಆದ್ರೆ ನಿಮ್ಮ ಬರಹ ಓದಿ ಎಲ್ಲೋ ಒಂದು ಕಡೆ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ನಾಡಿನ ಹೆಣ್ಣು ಮಕ್ಕಳು ಪೂರ್ತಿ ಕನ್ನಡವನ್ನು ಕೈ ಬಿಟ್ಟಿಲ್ಲ ಅನ್ನೋ ಸಮಾಧಾನ ಆಯ್ತು.
    ಬನವಾಸಿ ಬಳಗದ enguru.blogspot.com ನೋಡಿ, ಒಳ್ಳೊಳ್ಳೆ ಕನ್ನಡಿಗರ ಕಣ್ತೆರೆಸುವ ಬರಹಗಳು ಬರುತ್ತಾ ಇದೆ.

    ಹೀಗೆ ಬರೀತಾ ಇರಿ.

    ಅರುಣಾದ್ರಿ .ಎಮ್.ಜೆ

    ReplyDelete
  19. ತಮ್ಮ ಹೃದಯ ವಿಶಾಲವಾಗಿರ್ಬಹುದು..
    ಹಾಗಂತ ಹೊನ್ನಶೂಲಕ್ಕೇರಿಸ್ತಿದ್ದೀರಿ ನೋಡಿ..:D
    ತುಂಬ ಧನ್ಯವಾದಗಳು ಅರುಣಾದ್ರಿಯವರೆ..ಓದಿದ್ದಕ್ಕೆ,ಅಭಿಪ್ರಾಯ ತಿಳಿಸಿದ್ದಕ್ಕೆ ಮತ್ತು ಲಿಂಕ್ ಕಳುಹಿಸಿದ್ದಕ್ಕೆ..

    ReplyDelete
  20. bahaLa chennagide.. :-)
    ninna blog nannanu kannada kaliyuvudakke inspire maadide :P
    I hope u dont find any mistake in my above statement ;-)

    blog s too good kaNe.. keep writing :)

    ReplyDelete
  21. hey dearie...
    Sooooooooper kaNe....nan amma nin blog Odidru..Full excited state alli idare.. she will become great writer anthella HeLthidare...Even i felt so...U are too too good ..hats off to u...
    ithi
    thamma prana saki
    ranju

    ReplyDelete
  22. @Ranju
    ಅಯ್ಯೋ ರಂಜು..Aunty ನನ್ನ ಹುರಿದುಂಬಿಸೋಕೆ ಹಾಗೆ ಹೇಳಿದಾರೆ..ಅವರಿಗೆ ನನ್ನ hello ಹೇಳು ಮೊದಲು..ಆಮೇಲೆ ಧನ್ಯವಾದಗಳನ್ನು ಹೇಳು..ನೀ ಒದಿದ್ದು ಖುಶಿಯಾಯ್ತು ರಂಜು..

    ReplyDelete
  23. Kannada panditharige correct shishye :). Naavu Arun na kannada panditha antha yaavaaglu thamashe maadtha irthidvi :). Kannadadalli kelavu words hudukodu estu kasta antha gotthide + type maadodu kooda extra kelsa :). So lots of kudos for your effort :).

    While I agree with many of the things said, there are a few things that I need to say. Unlike you, naanu USge bandaaga nanage ansiddu bEre. US is a melting pot of cultures - sikkapatte jana iddaare. English bhaashe main language aadroonu, there are so many people from different cultures, different languages and different castes. Aadru estondu smooth aagi, gharshane illade life nadiyuthe illi (allalli eno saNNa putta galate irbahubu, aadru on the whole chennagide). Nangansodu, nammavaru innu bhaashe, jaathi, pantha anno vishyagaLalle sikkhaakonDu, munduvaritha illa antha. Kannada poets kooda "naavella Onde" antha haadthaare, ade yaaraadru Englishnalli maathaadida koodle adu doDDa crime aagutthe. How about we do what we want to and let others live the way they want to? Kannada , English, Hindi antha hoDdaaDo badalu, we are all human anno bhaavane yaavaga barodu? Bhaashabhimaana is good, aadre athiyaada bhaashabhimaana is a kind of obsession. Ade obsession na nammalliro problems ge divert maadidre, istu hothige enenO improvements aaghOgthidvu.

    Eega naavirodu onthara global prapanchadalli - naavu namma roots (Kannanda) bidbaardu correct, aadre English kooda aste mukhya. Prapanchadalli mukkalu kade Englishnalli enu problem ilde communicate maadbahudu, adanna astu easy aagi tegedu haakohaagilla.

    I talk to my daughter in Kannada, aadre my hubby is a mix of languages - his dad speaks marathi, mom is a kannadiga and he was brought up in Andhra, so he thinks of Telugu as "his" language, though his "mother-tongue" is Kannada! So imagine he has 3 roots! Naavibru Kannadadalli maathaadthivi, aadre when it comes to our daughter, Nanna roots bidbaardu andre avana roots kooda bidbaardalwe? Adikke naanu magaLige Kannada heLkotre, avanu Telugunalli maathaadthaane. US nalli irodrinda basic English barbeku. So she may grow up actually with a mixture of languages. Pakka kannadigaru idannu "bhaashe dilution" annabahudu...

    PS. Ond swalpa jaasti ne suththi hoDde ansutthe, naanu bareyoke shuru maaDidre nange control irolla :-D.

    ReplyDelete
  24. ಚೆನ್ನಾಗಿ ಬರೀತೀರಿ ದೀಪ್ತಿ ಅವರೆ..ನಿಮ್ ಬ್ಲೊಗ್ನಲ್ಲಿ ಕಲವು ವಿಶಯಗಳನ್ನ ಓದಿದೆ..ಹಿಡಿಸಿತು..ನಮ್ಮಿಬ್ಬರ ಮಧ್ಯೆ ಭಾಷಾಭಿಮಾನದ ಬಗ್ಗೆ ಸ್ವಲ್ಪ difference in opinion ಇದೆ..ನಿಮ್ಮ ದೃಷ್ಟಿಕೋನ ಬೇರೆಯಾಗಿದೆ..ನಾನು ಇವರೊಡನೆ ಹೀಗೆ ಎಷ್ಟೋ ಬಾರಿ ಮಾತಿಗಿಳಿದಿದ್ದೇನೆ..ಹೌದು..ನೀವು ಹೇಳಿದ ಹಾಗೆ ಬೇರೆ ದೇಶಗಳಲ್ಲಿ english ಬಳಕೆ ಮಾಡ್ದೆಯಿದ್ದರೆ ಜೀವನ ಕಷ್ಟ..ಆದರೆ english ಹೇಗೆ ಇಷ್ಟು ಪ್ರಾಧಾನ್ಯ ಪಡೀತು ಅಂತ ಯೋಚಿಸಬೇಕಲ್ವ..ಹೇಗೆ ಇಷ್ಟು ಜನ ಅದರ ಮೊರೆ ಹೋಗಿದಾರೆ..ಏಕೆ ಎಲ್ಲಾ libraryಗಳಲ್ಲು english ಪುಸ್ತಕಗಳಿದ್ದೇ ಇರ್ತಾವೆ?ಎಲ್ಲಾ ದೇಶಗಳಲ್ಲು ಎಲ್ಲಾ ಶಾಲೆಗಳಲ್ಲು english ಏಕೆ ಕಲಿಸ್ತಾರೆ?ನೀವ್ ಹೇಳಿದ ಕಾರಣಕ್ಕೆ..ಅದಿಲ್ಲದೆ ಜೀವನ ಸಾಗೋಲ್ಲ ಅನ್ನೋ ಪರಿಕಲ್ಪನೆಗೆ ಜನ ಒಳಗಾಗೋ ಅಷ್ಟು ಬೆಳೆದುಬಿಟ್ಟಿದೆ..ಆ ಪರಿಕಲ್ಪನೆ ನಿಜಾಂಶಕ್ಕೆ ಹತ್ತಿರವೂ ಹೌದು..ಈಗ ಸಮಯನ ಹಿಂದಕ್ಕೆಳೆದು ಸಂಸ್ಕೃತನೋ,ಲಾಟಿನೋ ಈ ಮಟ್ಟಕ್ಕೆ ಬಳೆಸಿದ್ರೆ ಜೀವನ ಹೇಗಿರ್ತಿತ್ತು ಅಂತ ಯೋಚಿಸೋಣ್ವ..ಇನ್ನೂ ಅದ್ಭುತವಾಗಿರ್ತಿತ್ತು ನನ್ನ ಪ್ರಕಾರ..ಆದ್ರೆ ಹಾಗಾಗಲ್ಲ..ನಾವು ಇಷ್ಟಾದ್ರೂ ಮಾಡ್ಬಹುದಲ್ಲ..ನಮ್ಮದೇ ಭಾಷೆಯಾದ ಕನ್ನಡನ ನಾವು ಮಾತನಾಡಬಹುದಲ್ಲ..ನಮ್ಮ ಕರ್ನಾಟಕದಲ್ಲಾದ್ರೂ ಅದು ಉಳಿದು ಬೆಳೆಯೋ ಹಾಗೆ ನೋಡ್ಕೋಬಹುದಲ್ಲ..english ಗೊತ್ತಿರ್ಬೇಕು..ಬೇಕಾದಾಗ ಬಳಸ್ಕೋಬೇಕು..ನಮ್ಮ ರಾಜ್ಯದಲ್ಲೇ english ಕನ್ನಡಕ್ಕಿಂತ ಹೆಚ್ಚು ಬಳಸ್ಬೇಕಾ?ಅದ್ರ ಅವಶ್ಯಕತೆ ಇದೆಯಾ?english ಬಗ್ಗೆ ನನಗೆ ದ್ವೇಶ ಇಲ್ವೇ ಇಲ್ಲ..ಹಾಗೆ ನೋಡಿದ್ರೆ german englishಗಿಂತ ಮತ್ತೂ ಇಷ್ಟ ಆಗತ್ತೆ..ವ್ಯಾಕರಣ ತುಂಬ ಚೆನ್ನಾಗಿದೆ..consistent ಆಗಿದೆ..ಈ ದೇಶದಲ್ಲಿ ಜನ ಅವ್ರ ಭಾಷೆನ ಕಾಪಾಡ್ಕೊಂಡಿದಾರೆ..ಮತ್ತೆ ನಿಮ್ಮ ಮಗಳು ಮೂರು ಭಾಷೆನ ಕಲಿಯೋದು ಅವಳ ಭಾಗ್ಯ..ಆದ್ರೆ ಅವಳು ಅಮೇರಿಕದವಳಾಗಿರ್ತಾಳೆ..ಅವಳಿಗೆ ಕೊನೆಗೆ ಯಾವ್ದು ಹೆಚ್ಚು ಇಷ್ಟ ಅಂತ ಕೇಳಿದ್ರೆ ಸಹಜವಾಗಿಯೇ english ಅಂತ ಹೇಳ್ತಾಳೆ..ಭಾಷೆ ಮೇಲೆ ಅಭಿಮಾನ ಇರ್ಬೇಕಾದ್ರೆ ಆ ರಾಜ್ಯದಲ್ಲೋ ದೇಶದಲ್ಲೋ ಇರ್ಬೇಕು..ಆ ಸಂಸ್ಕೃತಿಯಲ್ಲಿ ಬೆಳೀಬೇಕು..ಆಗ ಅದ್ರೊಡನೆ ಒಂದು ಭಾವನಾತ್ಮಕವಾದ ನಂಟು ಬೆಳೆದುಬಿಡತ್ತೆ..ಜಗತ್ತಿನ್ನ ಬೇರೆ ಯಾವ್ದೋ ಮೂಲೆಲಿ ಹೋಗಿ ಬದುಕ್ತಿರೋವಾಗ ನಮ್ಮ ಸಂಸ್ಕೃತಿಯ ಬೇರೆಲ್ಲ ಕೋನಗಳನು ಪರಿತ್ಯಾಗ ಮಾಡ್ಬೇಕಾಗ್ಬಹುದೇನೋ..ಆದ್ರೆ ಜೊತೆಲಿ ಮತ್ತೊಬ್ಬರಿದ್ರಾಯ್ತು ನಮ್ಮ ಭಾಷೆ ಮಾತಾಡೋಕೆ..ನಮ್ಮ ಸಂಸ್ಕೃತಿನ ಹೇಗೋ ಇನ್ನೂ ಉಳಿಸಿಕೊಂಡಿವೇನೋ ಅನ್ನೋ ತೃಪ್ತಿ ಇರತ್ತೆ ಅನ್ನೋದು ನನ್ನ ಅಭಿಪ್ರಾಯ.."Wordsworth classics" ಅಷ್ಟು ಏಕೆ ನಮ್ಮ ಪಂಪನ ಕಾವ್ಯಕಳಾಗ್ಲಿ ಕಾಳಿದಾಸನ ಶಾಕುಂತಲವಾಗ್ಲಿ ಮಾನ್ಯತೆ ಗಳಿಸ್ಲಿಲ್ಲ..ಈಗಿನ ಯುವಪೀಳಿಗೆ sheldonನ ಕಾದಂಬರಿಗಳನ್ನು ಓದೋ ಅಷ್ಟು ತ.ರಾ.ಸು ಅಥವಾ ಬೀಚಿಯವರ ಪುಸ್ತಗಳನ್ನ ಏಕೆ ಓದಲ್ಲ..ಈ ಮಹಾತ್ಮರು ಕನ್ನಡದಷ್ಟೇ ಚೆನ್ನಾಗಿ english ಮಾತನಾಡುತಿದ್ದರು..ಆದರೆ ಬೆಳೆಸಿದ್ದು ಕನ್ನಡವನ್ನಲ್ವೇ..ಈ ಸಣ್ಣ ವಿಷಯ ನಮ್ಮಂಥ ಸಾಮಾನ್ಯರಿಗೆ ಹುರಿದುಂಬಿಸೋ ಅಂಥದ್ದಲ್ವೇ..ಅಯ್ಯೋ ಹೆಚ್ಚು ಬರೀತಿನಿ..ಇಲ್ಲಿಗೆ ನಿಲ್ಲಿಸ್ತೀನಿ..ಬರೀತಿದ್ರೆ ಇನ್ನೂ ಹೀಗೆ ಹೋಗ್ತಿರತ್ತೆ ನನ್ನ ಯೋಚನಾಲಹರಿ..ನಾ ಏನು ಹೇಳ್ಬೇಕಂತಿದ್ದೆ ಅನ್ನೋದು ನಿಮಗೆ ಮುಟ್ಟಿತು ಅನ್ಕೋತೀನಿ..

    ReplyDelete
  25. @ ದೀಪ್ಸ್ - ದೀಪ್ಸ್ ಅವರೇ, ನಿಮ್ಮ ಎಲ್ಲ ಅಭಿಪ್ರಾಯಗಳನ್ನು ನಾನು ಒಪ್ಪುತ್ತೇನೆ. ಆದರೆ, ಅಮೆರಿಕ ದಲ್ಲಿ ಸಹಬಾಳ್ವೆ ನಡೆಸಬೇಕು ಎಂದರೆ ಇಂಗ್ಲಿಷ್ ಹೇಗೆ ಅಗತ್ಯವೋ, ಕರ್ನಾಟಕದಲ್ಲಿ ಒಂದೇ ಭಾಷೆ ಕನ್ನಡ ಬಳಸುವುದು ಸಹಬಾಳ್ವೆಯ ಸಂಕೇತ ಅಲ್ಲವೆ? ಅಮೆರಿಕದಲ್ಲಿ ಎಲ್ಲ ಸಂಸ್ಕ್ರುಥಿಯವರು ಇದ್ದರೂ, ಮಾತಾಡೋ ಭಾಷೆ ಇಂಗ್ಲಿಷ್. ಅದೇ ರೀತಿ, ಬೆಂಗಳೂರಿನಲ್ಲಿ ಎಲ್ಲ ಭಾಷೆಯ ಜನರಿದ್ದರೂ ಕನ್ನಡವನ್ನೇ ಬಳಸಬೇಕು ಎಂಬ ಸಾಮಾನ್ಯ ಜ್ಞಾನ ಹೊರಗಿನವರಿಗೂ ಇಲ್ಲ, ನಮಗೂ ಆ ಅರಿವು ಇಲ್ಲ! ಅಲ್ಲವೆ?

    ReplyDelete
  26. ತುಂಬಾ ಚೆನ್ನಾಗಿ ಬರ್ದಿದ್ದೀರಾ ಆಶಾ ಅವರೇ..
    ಅಮೇರಿಕದಂತಹ ಊರಲ್ಲಿ ಕೂತು ನೋಡೋರಿಗೆ, ಕರ್ನಾಟಕದಲ್ಲಿ ತಮ್ಮ ಪಾಲಿನ ಹಕ್ಕುಗಳಿಗಾಗಿ ಕನ್ನಡಿಗರು ಧ್ವನಿ ಎತ್ತೋದು parochial, fanatic ಅನ್ನಿಸೋದ್ರಲ್ಲಿ ಹೊಸತೆನಿಲ್ಲ. ಆದ್ರೆ ಸತ್ಯ ಏನು ಅಂದರೆ, ಅನಿಯಂತ್ರಿತ ವಲಸೆ, ಹಿಂದಿ ಹೇರಿಕೆ ಇಂತಹ ಅನ್ಯಾಯಗಳಿಂದಾಗಿ ನಿಧಾನವಾಗಿ ಬೆಂಗಳೂರಿನ ಕನ್ನಡದ ಗುರುತು ಮಾಯ ಆಗೋ ಹಂತಕ್ಕೆ ಹೋಗ್ತಾ ಇದೆ. ಇದನ್ನ ಯಾವ ಬೆಲೆ ತೆತ್ತಾದರೂ ಸರಿ ತಡಿಬೇಕು. ಬೆಂಗಳೂರು ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಅದಕ್ಕೆ ೬೦೦ ವರ್ಷಗಳ ಇತಿಹಾಸ ಇದೆ. ಕಳೆದ ಹತ್ತು ವರ್ಷದಲ್ಲಿ ಸಿಕ್ಕಾಪಟ್ಟೆ ಜನ ಹೊರಗಿನಿಂದ ಬಂದು ತುಂಬಿಕೊಂಡ್ರು ಅಂತಾ ಬೆಂಗಳೂರನ್ನ cosmopolitin ಮಾಡೋಕೆ ಆಗಲ್ಲ.
    ಇನ್ನೂ ಇಂಗ್ಲಿಷ್ ಬಗ್ಗೆ ಹೇಳಬೇಕು ಅಂದ್ರೆ.. ಅದು ಇವತ್ತಿನ ಅಗತ್ಯ. ಅದನ್ನ ಯಾರು ಅಲ್ಲಗಳೆಯುತ್ತಿಲ್ಲ. ಆದ್ರೆ ಅದು temporary ಪರಿಹಾರ. ಕರ್ನಾಟಕ ಮುಂದುವರೆದ ದೇಶಗಳ ಲೆಕ್ಕದಲ್ಲಿ ಮುಂದೆ ಬರಬೇಕು ಅಂದ್ರೆ, ಈ ನಾಡಿನ ಮಕ್ಕಳ ಕಲಿಕೆ ಕನ್ನಡದಲ್ಲೇ ಆಗಬೇಕು. ಅದು ಕೂಡ ಎಲ್ಲ ಹಂತದಲ್ಲಿ. ಕಲಿಕೆ ಆ ಕಲಿಕೆಯಿಂದ ಒಳ್ಳೆಯ ದುಡಿಮೆ ಹುಟ್ಟೋ ಹಂತಕ್ಕೆ ಕನ್ನಡದ ಬೆಳವಣಿಗೆ ಆಗಬೇಕು. ಅಲ್ಲಿವರೆಗೂ ಇಂಗ್ಲಿಷ್ ವ್ಯವಸ್ಥೆಯನ್ನ ದೂರ ಮಾಡಬಾರದು.

    ReplyDelete
  27. @V
    ಶ್ರೀಧರ್..ಬೆಂಬಲಕ್ಕೆ ತುಂಬ thansku..:)ನಿಮ್ಮ ಅಭಿಪ್ರಾಯವನ್ನ ನಾನು ಒಪ್ತೀನಿ..ನೀವು ಬ್ಲೋಗ್ ಶುರು ಮಾಡೋ ಸಮಯ ಬಂದಾಯ್ತು..ಬೇಗನೆ ಏನಾದ್ರೂ ಬರೆಯೋಕೆ ಶುರು ಮಾಡಿ..ಓದೋಕೆ ಕಾಯ್ತಿರ್ತೀನಿ

    @ಪಕ್ಕದ ಮನೆ ಹುಡುಗಾ!
    ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..ನಿಮ್ಮ ಬ್ಲೋಗ್ ನಲ್ಲಿ ಕೆಲವು ಪೋಸ್ಟ್ ಗಳು ಬಹಳ ಇಷ್ಟವಾದ್ವು..ಸೊಗಸಾಗಿ ಬರೀತೀರಿ..ಕನ್ನಡದ ಬಳವಣಿಗೆಗೆ ಹೋರಾಡ್ತಿರೋದು ಸ್ಪಷ್ಟವಾಗಿ ಕಾಣತ್ತೆ..ಸಂತೋಷವಾಯ್ತು..

    ReplyDelete
  28. ಆಶಾ ಅವರೇ,
    ನಿಮ್ಮ ನಲ್ಮೆಯ ಮಾತಿಗೆ ನನ್ನಿ. ನನ್ನ ಕನಸು ಕರ್ನಾಟಕದಲ್ಲಿ ಕನ್ನಡ, ಕನ್ನಡಿಗ ಸಾರ್ವಭೌಮರಾಗಬೇಕು. ನಮ್ಮ ನಾಡು ಜರ್ಮನಿ, ಜಪಾನ್, ಫ್ರಾನ್ಸ್ ತರಹ ಭಾಷೆ ಸುತ್ತಲೂ ವ್ಯವಸ್ಥೆ ಕಟ್ಟಿಕೊಂಡು ಉದ್ದಾರ ಆದ ದೇಶಗಳಂತೆ ಮುಂದುವರೆಯಬೇಕು.

    ReplyDelete
  29. Asha, drustikona artha aaithu.

    "ನಮ್ಮ ಸಂಸ್ಕೃತಿನ ಹೇಗೋ ಇನ್ನೂ ಉಳಿಸಿಕೊಂಡಿವೇನೋ ಅನ್ನೋ ತೃಪ್ತಿ ಇರತ್ತೆ ಅನ್ನೋದು ನನ್ನ ಅಭಿಪ್ರಾಯ."

    Ade naanu heLiddu. Nan magaLige atleast KannaDa da touch iraththe anno vishayane nange santhosha koDodu.

    Nangu English bagge athiyaada preethi enilla. English beLeyoke main kaaraNa Britishnavaru maadida colonization + charity anno hesarnalli maadida Christianity conversion. English adrinda tumba kaDE beLedu bittide. Eega namma deshadalli higher education ge mostly value illa + adakke thakka quality of life illa. Aadrinda most youngsters either kelsakke, athwa odhokke, athwa maduveyaagi horagina countries ge barthaare (ardha idakke prepare maadokke Englishnalli maathaadthaare - again idu naanu oppolla, naanu haage maadoo illa, aadre bereyavaru maaDodu noDiddene). Nan point enandre, aa quality of life improve maadidre nam young talentnoo uLiskobahudu + English praadhaanyathe automatic aagi iLidbidutte (Nange gothide, naanoo enu maadtha illa antha, ellaroo nan thara ne "helplessness" antha excuse use maadkothaare).

    V, naanu nimma maathanna allagaLeyodilla. Aadare naanu yaarannu Kannada maathaadi antha force maadodilla. Nandu "live and let live" policy. Naanu friends jote Kannadadalli maathaaDinni most of the times. Aaadare innobba rajaydinda bandavaru KannaDa kaliyalu ista ilde idre, avaranna force maadilla (encourage maaDiddini haudu). Avaru try maadlilla andre avara friendship na kaLkoLLokaguththa heLI? Nange bhaashe gintha maanawathwa mukhya antha heLidre adu thappa?

    Nam Kannadigara problem ade irbahudu, naavu tumba patient people, tumba welcoming people. Chennai ge ond sala hodre saakaguththe. Enu artha aagolla, yaaru help maadolla. What a beautiful way to treat people alwa? Nangansodu eraDoo extreme limits. Kannada beLibeku aadare tolerance kooda irbeku. Adakke naanu heLiddu athiyaada bhaashaabhimaanakku, bhaashaabhimaanakku difference ide antha.

    Naanu nan abhipraaya heLiddene, manassigenaadru novaagidre kshamisi biDi.

    ReplyDelete
  30. Innondu vishaya -

    "ನಮ್ಮ ನಾಡು ಜರ್ಮನಿ, ಜಪಾನ್, ಫ್ರಾನ್ಸ್ ತರಹ ಭಾಷೆ ಸುತ್ತಲೂ ವ್ಯವಸ್ಥೆ ಕಟ್ಟಿಕೊಂಡು ಉದ್ದಾರ ಆದ ದೇಶಗಳಂತೆ ಮುಂದುವರೆಯಬೇಕು."

    Idu hELodu tumba easy. Ondu example. Nan friend France nalli iddaaLe. AvaLu pregnant eega. You know what? She needs to know all the pregnancy related words in French! Yaakandre doctors, nurses yaaroo sariyaagi English maathadolla. Imagine, herige novallirovaaga, Enaagtha ide antha French nalli translate maadbeku. God forbid there is an emergency! What if she doesn't remember the correct word? Just trying to make a point about "athiyaada bhaashaabhimaana".

    ReplyDelete
  31. ದೀಪ್ತಿಯವರೆ..ನೀವು ವಿಶ್ವಮಾನವೀಯತೆಯ ಮಟ್ಟವನ್ನು ದಿಟ್ಟವಾಗಿ ಹೇಳಿದ್ದೀರಿ..ಕ್ಷಮಿಸಿ ಎಂದೆಲ್ಲ ದೊಡ್ಡಮಾತುಗಳನಾಡಬೇಡಿ..ಆದ್ರೆ ನಾವಷ್ಟು ಎಲ್ಲ ಭಾಷೆಗಳಿಗೂ ಹೊಂದಿಗೊಂಡು ಹೋದ್ರೆ,ಎದುರಿಗಿರುವರಿಗೆ ಯಾವ ಭಾಷೆ ಸುಲಭವೋ ಅದನ್ನೇ ಬಳಸ್ತಾ ಹೋದ್ರೆ ಇನ್ನೊಂದೆರಡು ಮೂರು ಪೀಳಿಗೆಯ ನಂತರ dilution level ಹೆಚ್ಚಾಗ್ತಾ ಆಗ್ತಾ ಕೊನೆಗೆ ಪೂರ್ತಿಯಾಗಿ ಅಳಿಸಿಹೋಗತ್ತೆ..ಸಂಸ್ಕೃತತ ಹಾಗೆ..ಹಾಗೆ ನಮ್ಮ ಸಂತೃತಿನೂ ಅಷ್ಟೇ dilute ಆಗಿರತ್ತೆ..ನಾವು ಹಾಗಿದ್ದೇ ಅಲ್ವೇ..ಇಲ್ಲೀವರೆಗೂ ಎಷ್ಟೋ ಹಳೆಯ ಸಂಪ್ರದಾಯಗಳನ್ನ ಸಂಪೂರ್ಣವಾಗಿ ಮರೆತುಬಿಟ್ಟಿರೋದು..

    ReplyDelete
  32. @ಪಕ್ಕದ ಮನೆ ಹುಡುಗಾ !
    ತಮ್ಮ ಕನಸು ಬೇಗ ನನಸಾಗಲಿ..ಅದ ನಾ ಕಾಣುವಂತಾಗಲಿ..

    ReplyDelete