Wednesday, June 10, 2009

ಮುಖಭಂಗ






















ಅಂದು ನಮ್ಮ ಬಳಗದ ಒಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ.ಹತ್ತಾರು ಜನರನ್ನು ಆಹ್ವಾನಿಸಿದ್ದರು.ನಾನೂ ಸಹ ಹೋಗಿದ್ದೆ..ಹೆಂಗಳೆಯರೆಲ್ಲ ಒಂದು ಬದಿ ಚಾಪೆಯ ಮೇಲೆ ಪೂಜೆಯನ್ನು ನೋಡುತ್ತ ಕುಳಿತಿದ್ದರು.

ಪುರೋಹಿತರು ಸಾಂಗವಾಗಿ ಪೂಜೆಯನ್ನು ನಡೆಸಿಕೊಡುತ್ತಿದ್ದರು.ದಂಪತಿಗಳು ಬಹಳ ಶ್ರದ್ಧಾಭಕ್ತಿಯಿಂದ ವ್ರತ ಮಾಡುತ್ತಿದ್ದರು.ಬೇಕಾದಷ್ಟು ತರಹ ಹಣ್ಣು ಹೂವುಗಳನ್ನು ದೇವರಿಗೆಂದು ತಂದಿರಿಸಿದ್ದರು.ಅದಕ್ಕೆಂದೇ ಮಂಟಪದೆದುರು ಒಂದು ಪ್ರತ್ಯೇಕ ಚಾಪೆಯನ್ನು ಹಾಸಿದ್ದರು.ನಾನು ಹಿಂದಿನ ಪಂಕ್ತಿಯಲ್ಲಿ ಕುಳಿತಿದ್ದೆ.ಪೂಜೆಯ ಮಧ್ಯೆ ಒಬ್ಬಳು ಚೆಂದದ ಹುಡುಗಿ ಎಲ್ಲರಿಗೂ ಬಣ್ಣ ಬಣ್ಣದ ಕಾಗದದಿಂದ ಅರಿಶಿನ ಪೊಟ್ಟಣಕ್ಕೆಂದು ಮಾಡಿದ ಹೂಗಳನ್ನು ಕುಂಕುಮ ಕೊಟ್ಟು ಹಂಚುತ್ತಿದ್ದಳು.

ಸ್ವಲ್ಪ ದೂರದಲ್ಲಿ ಆಟವಾಡಿಕೊಂಡು ಕುಳಿತಿದ್ದ ಸುಮಾರು
ಮೂರು ವರ್ಷದ ಮುದ್ದಾದ ಪುಟ್ಟ ಮಗುವಿನೆಡೆಗೆ ನನ್ನ ಗಮನ ಹರಿಯಿತು.ಕೇಳಿ ತೆಗೆದುಕೊಂಡ ಕಾಗದದ ಹೂವನ್ನು ಅತೀ ಜಾಗರೂಕತೆಯಿಂದ ಬಿಡಿಸಿ ಪೊಟ್ಟಣವನ್ನು ಬೇರೆ ಮಾಡುತ್ತಿತ್ತು.ಆಗ ಅದರ ಹಿಂದೆಯೇ ಕುಳಿತಿದ್ದ ಒಬ್ಬಳು ಮಧ್ಯವಯಸ್ಸಿನ ಹೆಂಗಸು ಮಗುವಿನ ಜುಟ್ಟನ್ನು ಮೆಲ್ಲನೆ ಎಳೆದರು. ತಿರುಗಿ ನೋಡಿದ ಮಗುವನ್ನು ಮಾತನಾಡಿಸಲನುವಾದರು. ಹೆಸರೇನೆಂದು ಕೇಳಿ ಶುರು ಮಾಡಿದ ಮಾತುಕತೆ ಮುಂದುವರೆಯುತ್ತಲೇ ಇತ್ತು.ಆ ಹೆಂಗಸಿಗೆ ಮಕ್ಕಳನ್ನು ಕಂಡರೆ ಬಹಳ ಇಷ್ಟವಿರುವಂತೆ ತೋರುತ್ತಿತ್ತು. ಮಗುವೂ ಮುದ್ದು ಮುದ್ದಾಗಿ ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಿತ್ತು. A,B,C ಹೇಳಿಸಿದರು. ಅ,ಆ,ಇ,ಈ ಇವರು ಕೇಳಳಿಲ್ಲ..ಮಗುವೂ ಹೇಳಲಿಲ್ಲ..Rhymes ಹೇಳಿಸಿದರು..ಒಂದಾದಮೇಲೊಂದು ಬಿಡುವಿಲ್ಲದೆ ಆ ಚೂಟಿ ಮಗು ಹೇಳುತ್ತಲೇ ಇತ್ತು..ಆಗಾಗಲೇ ಸಾಕಷ್ಟು ಜನರ ಗಮನ ಇತ್ತ ಕಡೆ ಹರಿದಿತ್ತು..ಪುರೋಹಿತರು ಒಮ್ಮೆ "ಸದ್ದು!" ಎಂದು ಕೂಗಿದ್ದೂ ಆಯ್ತು..ಆದರೂ ಆ ಹೆಂಗಸು ಮತ್ತು ಮಗುವಿನ ಸಂಭಾಷಣೆ ಮುಗಿಯುವಂತೆ ಕಾಣಲಿಲ್ಲ..ಮಗು ಬೆಕ್ಕು,ಆನೆ,ಹುಲಿಗಳ ಹಾಗೆ ಸದ್ದು ಮಾಡಿ ತನ್ನ ಪ್ರತಿಭೆಯನ್ನು ತೋರಿಸಿತು..ನಂತರ "ನಾಯಿ ಹೇಗೆ ಬೊಗಳುತ್ತೆ ಚಿನ್ನ" ಎಂದು ಕೇಳಿದರು..ಮಗು ತನ್ನ ಸಣ್ಣ ಧ್ವನಿಯಲ್ಲಿ "ಬೌ" ಎಂದಿತು..ಆ ಹೆಂಗಸು "No dog in this world barks so softly" ಎಂದು ಹೇಳಿದರು..ಅದಕ್ಕೆ ಮಗು ಸ್ವಲ್ಪ ಜೋರಾಗಿ "ಬೌ ಬೌ" ಎಂದಿತು..ಆ ಹೆಂಗಸು ನಕ್ಕು,"ಇಷ್ಟೆನೆ..ನೋಡು..ಹೀಗೆ..ಬೌ ಬೌ ವೌ" ಎಂದು ಸ್ವಲ್ಪ ದೊಡ್ಡ ದನಿಯಲ್ಲಿ ಸದ್ದು ಮಾಡಿದರು..ಅವರನ್ನೆ ನೋಡುತ್ತಿದ್ದ ಚುರುಕು ಬುದ್ಧಿಯ ಮಗು ತನ್ನ ಬಲಗೈಯ ಕೈಬೆರಳುಗನೆಲ್ಲ ಮುದ್ದು ಮುದ್ದಾಗಿ ಜೋಡಿಸಿ ಮುಂದಕ್ಕೆ ಚಾಚಿ ಏನೋ ಕೊಡುವಂತೆ ನಟಿಸುತ್ತ "ತ್ಚು ತ್ಚು ತ್ಚು" ಎಂದು ಹೇಳಿತು!!!!!
ಆಹಾ..ಆ ಪುಟ್ಟ ಮಗುವಿನ ದನಿಯಲ್ಲಿ ಎಷ್ಟು ವ್ಯಂಗ್ಯ!ಒಂದು ನಿಮಿಷ ಇದು ನಿಜವಾಗಿಯು ಅಷ್ಟು ಚಿಕ್ಕ ಮಗುವೇ ಎನ್ನಿಸಿತು...ಅಲ್ಲಿದ್ದವರಲ್ಲಿ ಕೆಲವರಿಗೆ ನಗು ಬಂತು..ಆದರೂ ನಕ್ಕು ಅಪದ್ಧವಾಗುವುದು ಬೇಡವೆಂದು ಆ ಮಗುವನ್ನು ಮನಸ್ಸಿನಲ್ಲೇ ಹೊಗಳುತ್ತಿದ್ದರು..ಮತ್ತೆ ಕೆಲವರು ತೆಗಳುತ್ತಿದ್ದರೋ ಏನೋ..ಆ ಮಗುವಿನ ಬುದ್ಧಿ ಸ್ವಲ್ಪ ವಕ್ರವೆನಿಸಿದರೂ ಚುರುಕು ಎನ್ನುವುದಂತೂ ಒಪ್ಪುವ ವಿಷಯವೇ..ಅವರಿಬ್ಬರ ಸಂಭಾಷಣೆ ಆಲ್ಲಿಗೆ ಮುಗಿಯಿತು..ಅಷ್ಟರಲ್ಲಿ ಮಂಗಳಾರತಿಗೆಂದು ಜನ ಏಳುತ್ತಿದ್ದನ್ನು ನೋಡಿ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ನೆನೆಸಿಕೊಳ್ಳುತ್ತಿದ್ದೆ..ಇದ್ದಕ್ಕಿದ್ದಂತೆ ಹಸಿವು ಹೆಚ್ಚಾದಂತೆ ಭಾಸವಾಯಿತು..ಆ ಮಗುವಿನ ಹೆಸರು ನೆನಪಿಲ್ಲದಿದ್ದರೂ ಅದೇಕೋ ಈ ಸಣ್ಣ ಘಟನೆಯ ನೆನಪು ಮಾಸದೆ ಇನ್ನೂ ಉಳಿದಿದೆ..

5 comments:

  1. ಹೌದು ಶಿವಪ್ರಕಾಶ್ ಅವರೆ..ಅದು ಪುಟ್ಟ ಪಾಪ ಆದ್ರೆ..ಅವ್ರೂ ಕೂಡ ಪಾಪ..:D

    ReplyDelete
  2. Ree multifaceted personality Asha avare, nimma chitra sooperru...ee chitravannu yavdo antarjaalada taaNadinda(website) inda copy madiddiri endu kondidde :D...amele nimma sahi nodide...Heege antha gottidre, nanna foto kottu pencil sketch haakso tha idde NIE li...

    ReplyDelete
  3. ಹ ಹ..ಧನ್ಯವಾದಗಳು V ಅವರೆ..ಆದ್ರೆ ನಾನೇದ್ರಿದ್ರೂ ಮುಖಾಮುಖಿ ಚಿತ್ರಿಸ್ತೀನಿ..ಇಷ್ಟು ಮಾತ್ರ ಭರವಸೆ ಕೊಡಬಲ್ಲೆ..ನಿಮ್ಮ ಭಾವಚಿತ್ರದಲ್ಲಿ ನಿಮ್ಮನ್ನಲ್ಲದ್ದಿದ್ದರೂ ಕಡೆ ಪಕ್ಷ ನಿಮ್ಮ ತಮ್ಮನನ್ನಾದರೂ ನೋಡ್ತೀರಿ..:D

    ReplyDelete
  4. ವಹ..ಇದು ಇನ್ನು talented ಕೆಲಸ...ಎದುರಿಗೆ ಇರೋ ವ್ಯಕ್ತಿಯ ಚಿತ್ರದಲ್ಲೇ ಆತನ ತಮ್ಮನನ್ನು ತೋರಿಸುವ ನಿಮ್ಮ ಕುಶಲತೆಗೆ ನಾನು ಮಾರುಹೋದೆ...ನನ್ನ ತಮ್ಮನ ಫೋಟೋ ಕೊಟ್ರೆ, ನಂಗೆ ಇಲ್ಲದೆ ಇರೋ ನನ್ನ imaginary ಮೂರನೇ ತಮ್ಮನ ಫೋಟೋ ಪೇಯಿಂಟ್ ಮಾಡ್ತಿರ -ಅನ್ಸತ್ತೆ... :-ಡ {:-D}

    ReplyDelete